have eternal life


ನಿತ್ಯಜೀವನ ದೊರೆತಿದೆಯೇ?

ನಿತ್ಯಜೀವನಕ್ಕೆ ಬೈಬಲ್ ಒಂದು ಸ್ಪಷ್ಟವಾದ ಮಾರ್ಗವನ್ನು ತೋರಿಸುತ್ತದೆ. ಮೊದಲನೆಯದಾಗಿ, ನಾವು ದೇವರ ವಿರುದ್ಧವಾಗಿ ತಪ್ಪು ಮಾಡಿದ್ದೇವೆಂದು ಗುರುತಿಸಿಕೊಳ್ಳಬೇಕು: “ ಎಲ್ಲರೂ ಪಾಪವನ್ನು ಮಾಡಿದ್ದಾರೆ ಮತ್ತು ದೇವರ ಮಹಿಮೆಯಿಂದ ದೂರ ಸರಿದಿದ್ದಾರೆ" (ರೋಮನ್ಸ್ 3:23). ನಮ್ಮನ್ನು ಶಿಕ್ಷೆಗೆ ಅರ್ಹವನ್ನಾಗಿ ಮಾಡುವ, ದೇವರು ಮೆಚ್ಚದಿರುವ ವಿಷಯಗಳನ್ನು ನಾವೆಲ್ಲಾ ಮಾಡಿದ್ದೇವೆ. ನಮ್ಮ ಎಲ್ಲಾ ಪಾಪಗಳು ನಿತ್ಯವಾದ ದೇವರ ವಿರುದ್ಧವಾಗಿರುವುದರಿಂದ, ನಿತ್ಯವಾದ ಶಿಕ್ಷೆಯು ಮಾತ್ರ ಸಾಕಾಗುತ್ತದೆ. “ಪಾಪಕ್ಕೆ ಕೊಡುವ ಸಂಬಳ ಮರಣವೇ, ಆದರೆ ನಮ್ಮ ಏಸು ಕ್ರಿಸ್ತನ ಮೂಲಕ ನಿತ್ಯಜೀವನವೇ ದೇವರ ಉಡುಗೊರೆ" (ರೋಮನ್ಸ್ 6:23)

ಆದರೆ ಪಾಪರಹಿತನಾದ ಏಸು ಕ್ರಿಸ್ತ, (1 ಪೀಟರ್ 2:22), ದೇವರ ಶಾಶ್ವತನಾದ ಪುತ್ರ, ಒಬ್ಬ ಮನುಷ್ಯನಾದನು.(ಜಾನ್ 1:1,14) ಮತ್ತು ನಮ್ಮ ದಂಡವನ್ನು ತೆರಲು ಮರಣ ಹೊಂದಿದರು. “ ಇದರಲ್ಲಿ ದೇವರು ನಮ್ಮ ಬಗ್ಗೆ ಹೊಂದಿರುವ ಪ್ರೇಮವನ್ನು ನಿದರ್ಶಿಸುತ್ತಾನೆ: “ನಾವಿನ್ನೂ ಪಾಪಿಗಳಾಗಿರುವಾಗಲೇ ದೇವರು ನಮಗಾಗಿ ಮರಣವನ್ನಪಿದನು. " (ರೋಮನ್ಸ್5:8). ಯೇಸು ಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದರು(ಜಾನ್ 19:31-42), ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತೆಗೆದುಕೊಳ್ಳುತ್ತಾ (2 ಕರಿಂತಿಯನ್ಸ್ 5:21). ಮೂರು ದಿನಗಳ ನಂತರ ಅವರು ಸಾವಿನಿಂದ ಮೇಲೆದ್ದರು (1 ಕರಿಂತಿಯನ್ಸ್ 15:1-4), ಪಾಪ ಮತ್ತು ಮರಣದ ಮೇಲೆ ಅವರ ವಿಜಯವನ್ನು ಸಾರುತ್ತಾ . " ತನ್ನ ಮಹಾನ್ ಕರುಣೆಯಲ್ಲಿ, ಯೇಸು ಕ್ರಿಸ್ತನನ್ನು ಮರಣದಿಂದ ಪುನರುಜ್ಜೀವನಗೊಳಿಸುವ ಮೂಲಕ ಅವನು ನಮಗೆ ಜೀವಂತ ಭರವಸೆಯ ಹೊಸ ಜನ್ಮವನ್ನು ನೀಡಿದ್ದಾನೆ." (1 ಪೀಟರ್ 1:3)

ಶ್ರದ್ಧೆಯಿಂದ, ನಾವು ಕ್ರಿಸ್ತನ ಬಗ್ಗೆ ನಮ್ಮ ಮನೋವಿಚಾರಗಳನ್ನು ಬದಲಿಸಿಕೊಳ್ಳಬೇಕು- ಅವನು ಯಾರು, ಅವನು ಏನನ್ನು ಮಾಡಿದನು, ಮತ್ತು ಏಕೆ - ರಕ್ಷಣೆಗಾಗಿ (ಕಾಯ್ದೆಗಳು 3:19). ನಾವು ನಮ್ಮ ಶ್ರದ್ಢೆಯನ್ನು ಅವನಲ್ಲಿಟ್ಟರೆ, ನಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಶಿಲುಬೆಯ ಮೇಲೆ ಅವರ ಮರಣದಲ್ಲಿ ವಿಶ್ವಾಸವಿರಿಸಿದರೆ, ನಾವು ಕ್ಷಮಿಸಲ್ಪಡುತ್ತೇವೆ ಮತ್ತು ಸ್ವರ್ಗದಲ್ಲಿ ನಿತ್ಯಜೀವನದ ಅಭಯದಾನವನ್ನು ಪಡೆಯುತ್ತೇವೆ. "ದೇವರು ಜಗತ್ತನ್ನು ಎಷ್ಟು ಪ್ರೀತಿಸಿದನೆಂದರೆ ತನ್ನನ್ನು ನಂಬಿದ ಯಾರೇ ಆಗಲಿ ಅವರು ನಾಶ ಹೊಂದದೆ ನಿತ್ಯಜೀವನವನ್ನು ಹೊಂದುವಂತಾಗಲು ಅವನು ತನ್ನ ಏಕೈಕಪುತ್ರನನ್ನು ಕೊಟ್ಟನು" (ಜಾನ್ 3:16). "ನೀವು ನಿಮ್ಮ ಬಾಯಿಯಿಂದ ತಪ್ಪೊಪ್ಪಿಗೆ ಮಾಡುತ್ತಾ ಹೇಳಿದರೆ, ’ಯೇಸುವು ದೇವರು’ ಮತ್ತು ದೇವರು ಅವನನ್ನು ಮರಣದಿಂದ ಹೊರತಂದ ಎಂದು ಹೃದಯದಲ್ಲಿ ನಂಬಿದರೆ, ನೀವು ಕಾಪಾಡಲ್ಪಡುತ್ತೀರಿ” (ರೋಮನ್ಸ್ 10:9). ಶಿಲುಬೆಯ ಮೇಲಿರುವ ಕ್ರಿಸ್ತನ ಪೂರ್ಣವಾದ ಕೆಲಸದ ಮೇಲಿನ ಶ್ರದ್ಧೆ ಮಾತ್ರವೇ ನಿತ್ಯಜೀವನಕ್ಕೆ ನಿಜವಾದ ದಾರಿ! ” ಏಕೆಂದರೆ ನೀವು ಕೃಪೆಯಿಂದ, ಕಾಪಾಡಲ್ಪಟ್ಟಿದ್ದೀರಿ, ಶ್ರದ್ಧೆಯಿಂದ – ಮತ್ತು ಇದು ನಿಮ್ಮಿಂದಲೇ ಆದದ್ದಲ್ಲ, ಇದು ದೇವರ ಕೊಡುಗೆ – ಆತ್ಮಶ್ಲಾಘನೆ ಮಾಡಿಕೊಳ್ಳಲು ದಾರಿ ಮಾಡಿಕೊಡುವ ಕರ್ಮಗಳಿಂದಲ್ಲ” (ಎಫೆಸಿಯನ್ಸ್ 2:8-9).

ನೀವು ಯೇಸು ಕ್ರಿಸ್ತನನ್ನು ನಿಮ್ಮ ಉದ್ಧಾರಕನನ್ನಾಗಿ ಒಪ್ಪಿಕೊಳ್ಳಲು ಇಚ್ಛಿಸಿದರೆ, ಇಲ್ಲೊಂದು ಮಾದರಿ ಪ್ರಾರ್ಥನೆಯಿದೆ. ನೆನಪಿರಲಿ ಈ ಪ್ರಾರ್ಥನೆಯನ್ನು ಅಥವಾ ಯಾವುದೇ ಇತರ ಪ್ರಾರ್ಥನೆಯನ್ನು ಹೇಳುವುದು ನಿಮ್ಮನ್ನು ರಕ್ಷಿಸುವುದಿಲ್ಲ. ಕ್ರಿಸ್ತನಲ್ಲಿ ವಿಶ್ವಾಸವಿರಿಸುವುದು ಮಾತ್ರ ನಿಮ್ಮನ್ನು ಪಾಪದಿಂದ ರಕ್ಷಿಸುತ್ತದೆ. ಈ ಪ್ರಾರ್ಥನೆಯು ಅವನೆಡೆಗಿರುವ ನಿಮ್ಮ ಶ್ರದ್ಧೆಯನ್ನು ವ್ಯಕ್ತ ಪಡಿಸಲು ಮತ್ತು ನಿಮ್ಮ ಮುಕ್ತಿಗಾಗಿ ಅವಕಾಶ ಒದಗಿಸುದುದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಲು ಸುಮ್ಮನೆ ಒಂದು ದಾರಿ.

" ದೇವರೇ, ನಾನು ನಿನ್ನ ವಿರುದ್ಧ ಪಾಪವನ್ನು ಮಾಡಿದ್ದೇನೆ ಮತ್ತು ಶಿಕ್ಷೆಗೆ ಅರ್ಹನೆಂದು ಅರಿತಿದ್ದೇನೆ. ಆದರೆ ಅವರಲ್ಲಿಟ್ಟ ಶ್ರದ್ಧೆಯ ಮೂಲಕ ನಾನು ಕ್ಷಮೆಯನ್ನು ಹೊಂದುವಂತಾಗಲು ನನಗೆ ಸಲ್ಲಬೇಕಾಗಿದ್ದ ಶಿಕ್ಷೆಯನ್ನು ಯೇಸು ಕ್ರಿಸ್ತ ಪಡೆದನು. ಮುಕ್ತಿಗಾಗಿ ನಾನು ನನ್ನ ವಿಶ್ವಾಸವನ್ನು ನಿನ್ನಲ್ಲಿಡುತ್ತೇನೆ. ನಿನ್ನ ಅದ್ಭುತವಾದ ಕೃಪೆ ಮತ್ತು ಕ್ಷಮೆಗಾಗಿ – ನಿತ್ಯಜೀವನದ ಉಡುಗೊರೆಗಾಗಿ ಧನ್ಯವಾದಗಳು! ಅಮೇನ್!”




AMAZING GRACE BIBLE INSTITUTE